Random Video

ಯಶ್ ನಂತರ ದುಬಾರಿ ಕಾರು ಖರೀದಿಸಿದ ನಟಿ ಹರಿಪ್ರಿಯಾ | FIlmibeat Kannada

2017-12-07 2 Dailymotion

ಸಿನಿಮಾ ತಾರೆಯರು ಒಬ್ಬರ ನಂತರ ಮತ್ತೊಬ್ಬರಂತೆ ಹೊಸ ಹೊಸ ಕಾರು ಖರೀದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ 3 ಬೆಂಜ್ ಕಾರು ಕೊಂಡುಕೊಂಡಿದ್ದರು. ಅದರ ಬೆನ್ನಲ್ಲೆ ಚಂದನವನದ ಮುದ್ದು ಚೆಲುವೆ ಹರಿಪ್ರಿಯಾ ಕೂಡ ದುಬಾರಿ ಕಾರ್ ಖರೀದಿಸಿದ್ದಾರೆ.ಈ ವಿಷ್ಯವನ್ನ ಸ್ವತಃ ಹರಿಪ್ರಿಯಾ ಅವರೇ ತಮ್ಮ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ತಮ್ಮ ನೂತನ ಕಾರ್ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ.ಅಷ್ಟಕ್ಕೂ, ಹರಿಪ್ರಿಯಾ ಖರೀದಿಸಿರುವ ಆ ಕಾರ್ ಯಾವುದು? ಹರಿಪ್ರಿಯಾ ಇನ್ಮುಂದೆ 'ಜಾಗ್ವಾರ್' ಕಾರಿನಲ್ಲಿ ಸವಾರಿ ಮಾಡಲಿದ್ದಾರೆ. ಯಾಕಂದ್ರೆ, ಹರಿಪ್ರಿಯಾ ಹೊಸದಾಗಿ ಖರೀದಿಸಿರುವ ಕಾರ್ ಕೆಂಪು ಬಣ್ಣದ ಜಾಗ್ವಾರ್.''ಜಾಗ್ವಾರ್' ಕಾರೀನ ಮಾಲೀಕರೆನಿಸಿಕೊಳ್ಳುವುದು ಹೆಮ್ಮೆ ಎನಿಸುತ್ತಿದೆ. ನನ್ನ ಕಾರ್ ಕ್ರೇಜ್ ಮತ್ತು ಡ್ರೈವಿಂಗ್ ಕ್ರೇಜ್ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ'' ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

haripriya is one of the best actress in kannada industry, Now haripriya bought a New Jaguar Car and she is only mentioned in twitter about car